Sunday 7 June 2020

ರೈತರ ಕಾಲ ಮಳೆಗಾಲ

ಆರಂಭ ಆರಂಭ ಆರಂಭವೋ
ಮಳೆಗಾಲ ರೈತರ ಬೆಳೆಗಾಲವೋ
ರೈತರ ಭೂಮಿಗೆ ಬಂದಂತ ಸುಖ ಕಾಲವೋ
ರೈತರ ಬಿತ್ತನೆಯ ಚಿಗುರೊಡೆದ‌ ಈ ಕಾಲವೋ
ಪ್ರಾಣಿಗಳ ಹಸು ನಿಗಿಸೋ ಈ ಕಾಲವೋ
ರೈತನ ಜೀವನವೇ ಬೆಳಗೊ ಈ ಕಾಲವೋ
ಚಿಗುರೊಡೆಯೊ ಬೆಳೆಗಳ ಮಹಾಕಾಲವೋ
ಬಂದಂತ ಹಸುರೆಳೆಯ ಋತುಮಾನವೋ
ಮನುಕುಲದ ಉಳಿವು ಇದರಿಂದಲೋ
ಸೋಗಸಾದ ಗಾಳಿಯ ತಂದಂತ ಈ ಕಾಲವೋ
ಪ್ರಾಣಿಗಳ ಹಸುಗಳ ಬೆಳವಣಿಗೆಯೋ
ಈ ಕಾಲ ಬಂತು ಅಲ್ಲೋ ನೆಮ್ಮದಿಯೇ ತಂದಿತಲ್ಲೋ

Wednesday 12 February 2020

ಹಳ್ಳಿ ಪಾಡು.

ಹಳ್ಳಿ ಹಾಡು
ಹಳ್ಳಿಯ ಮಕ್ಕಳೆ ಕೇಳಿರಿ
ಈ ಮನದ ಕಥೆಯ||
ಮಣ್ಣಿನ ದಣಿಗಳು ಬೆಳೆಯುವುದು
ಅನ್ನವ ನಿಯ್ಯುವ ಜನಕೆಲ್ಲ||
ಬಾಳಲಿ ಜೀವನ ಸುಖದಲಿ ಎಂದು
ಜನರ ಮನವ ಗೆಲ್ಲುವರು||
ಕಷ್ಟಗಳು ತಿರಿದವು ಎನ್ನುತ ರೈತರು
ಮನದಲಿ ಸುಖವ ಕಾಣುವರು||
ರೈತರು ಗಡಿಗೆ ಅನ್ನವ ಇಕ್ಕಿ
ಹೊಲದ ಕಡೆಗೆ ನಡೆಯುವರು||
ರೈತರು ತಮ್ಮನು ಹೊಲದಲ್ಲಿ ತೊಡಗಿಸಿ
ಅನ್ನವ ತಾವು ಉಣ್ಣುವರು||
ರೈತರು ಹೊಲದಲಿ ನೇಗಿಲ ಹಿಡಿದು
ಉಳುಮೆಯ ಮಾಡುತ ಸಾಗುವರು||
ಕಳವನು ತೆಗೆದು ಬೆಳೆಯನು ಬೆಳೆದು
ಲೋಕಕೆ ಅನ್ನವ ನೀಡುವರು||
ಕೇಳಿರಿ ಮಕ್ಕಳೆ ರೈತರ ಕಥೆಯ
ದಿನದಿ ಕಾಯಕ ನಡೆಸುವರು||
ಸುಖದಿ ಜೀವನ ಇವರದೆ ಎಂದು
ತಮಗಾ ಮನದಿ ಹೇಳುವೇನು||

Tuesday 11 February 2020

ಜೀವನದ ಪ್ರತಿ ಘಟ್ಟ.

ಜೀವನ ಜೋಪಾನ
ದುಡುಕುವುದು ಸಹಜ,ಸುಲಭ
ಆದರೆ ಅನುಭವಿಸುವುದು ಕಠೀಣ,ಕಷ್ಟ
ಆದರೆ ತಿಳಿಯದೆ ಮಾಡಿದ ತಪ್ಪಿಗೆ
ಅನಿವಾರ್ಯವಾಗಿ ಹೊಣೆ ನಾವೆ.

ಕೊಪ ಬಂದಾಗ ಆದಷ್ಟು ತಾಳ್ಮೆಬೇಕು
ಅಳು ಬಂದಾಗ ಆದಷ್ಟು ನಗುಬೇಕು
ಮಾತನಾಡಿದ ಮೇಲೆ ಅನುಭವಿಸಲೇಬೇಕು
ಇದನ್ನರಿತು ತಿಳಿದು ನಡೆಯಲೇಬೇಕು.

ಇದೆ ಜೀವನ
ಇದನ್ನರಿತವನೆ ಜಾಣ
ಇದರೊಂದಿಗೆ ಹೊಂದಿಕೊಂಡು
 ಹೋಗುವವನೆ ಮನುಜ.

Sunday 9 February 2020

ಮಾನವನ ಬದುಕಿನ, ಜೀವನದ,ಆಲಷ್ಯದ ನಾನ್ನುಡಿಗಳು.

ಸೋಮಾರಿಗಳು
ಸೋಮಾರಿಗಳ ಲಕ್ಷಣ
 ಸಮಯದ ವ್ಯಸನ
ಇದೆ ಸೋಲಿನ ಶಕುನಾ.

ಸಾಧನೆಯ ಹಾದಿಯಲ್ಲಿ 

ಕಷ್ಟಗಳ ಸುರಿಮಳೆ
ಕಲಿಕೆಯಲ್ಲಿ ತೊಂದರೆ
ಇದುವೇ ಸಾಧನೆಯ ಸೂಚನೆ.

 
ಹುಟ್ಟು ಶಾಶ್ವತವಲ್ಲ


ಹುಟ್ಟಿದ ಮೇಲೆ ಅನುಭವಿಸಲೇಬೇಕು
ಸತ್ತ ಮೇಲೆ ನೆನಪಾಗಲೇಬೇಕು
ಇದ್ದಾಗಲೇ ಸಾಧಿಸಲೇಬೇಕು.
     
ವಂದನೆ.